| |
South
Indian Inscriptions |
| |
|
|
|
TEXT OF INSCRIPTIONS
No. 430
(A. R. No. 567 of 1929-30)
HATTYAṄGAḌI, COONDAPOOR TALUK, SOUTH KANARA DISTRICT
Slab (No. 4) set up in the prākāra of Lōkanāthēśvara temple
1591 A.D.
This registers a gift of land at Hosabeṭṭu in Guḷavāi village in
Har-naḍu, by Baṅkiyarasa alias Hoṁneya-Kaṁbaḷi-voḍeya, to god
Lkanathadeva of Haṭṭiyaṅgaḍi.
It is dated Śaka 1512, Vikṛiti, Māghu śu. 3, Monday corresponding
to 1591 A.D., June 18.
TEXT
1 ಸ್ವಸ್ತಿ ಶುಭಮಸ್ತು ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರಯಿಲೋಕ್ಯ |
2 ನಗರಾರಂಭ ಮೂಲಸ್ತಂಭಾಯ ಶಂಭವೇ | ಸ್ವಸ್ತಿಶ್ರೀ ವಿಜಯೊಭ್ಯುದಯ
ಶಾಲಿವಾಹ – |
3 ನ ಶಕವರುಶ 1512 ಸಂದು ಸಲುವ ವರ್ತಮಾನ ವಿಕ್ರುತಿ ಸಂವತ್ಸರದ
ಮಾಘ ಶು 3 ಚ – |
4 ೦ದ್ರವಾರದಲೂ ಹಟ್ಟಿಯಂಗಡಿಯ ಲೋಕನಾಥದೇವರ ದಿವ್ಯಶ್ರೀಪಾದಪದ್ಮಂಗಳಿಗೆ
ಬಂಕಿ |
5 ಯರಸರಾದ ಹೊಂನೆಯಕಂಬಳಿ ವೊಡೆಯರು ಶಾಷ್ಟಾಂಗ ವೆಱಗಿ ವೊಡವಟ್ಟು
ಕೊಟ್ಟಧರ್ಮ್ಮ – |
6 ಸಾಧನದ ವಖಣಿಯ ಕ್ರಮವೆಂತೆಂದರೆ ನಂಮ ಹಾಂರ್ನಾಡ ಗುಳವಾಡಿಯ
ಮಂದಿನೊಳಗೆ |
7 ಹೊಸಬೆಟ್ಟಿನಲ್ಲಿ ನಂಮ ಅರಮನೆಯ ಬದ ಬಾಳು ಹಿರಿಯಗದ್ದೆಯ ಚತುಸ್ಸೀಮೆಯ
ವಿವರ ಮು – |
8 ಡಲು ತಿಂಮೆಯನಾಯಕರ ಸಂತಾನದವರ ಗಡಿಯಿಂದಲೂ ಸಂಣ
ಬೆಂಮಣಸೆಟ್ಟಿಯಗಡಿ- |
9 ಯಿಂದಲೂ ಪಡುವಲು ತೆಂಕಲು ಸಂಣಬೆಂಮಣ ಸೆಟಿಯ ಕೆಱಿಯ ಗದೆಯ
ಗಡಿಯಿಂದ – |
10 ಲೂ ತಿಂಮೆಯನಾಯಕರ ಸಂತಾನದವರ ಅಯಿವತ್ತು ಹಾನೆ ಗದೆಯ ಗಡಿಯಿಂದಂ
ಬಡ – |
11 ಗಲು ಪಡುವಲು ಹರಿವ ಬಚಲ ಗಡಿಯಿಂದಂ ಮೂಡಲು ಬಡಗಲು
ಹರಿದ ಬಚಲ ಗಡಿ – |
| |
|
\D7
|