| |
South
Indian Inscriptions |
| |
|
|
|
TEXT OF INSCRIPTIONS
TEXT
1 ಸ್ವಸ್ತಿ ಬಹುಧಾನ್ಯ ಸಂವತ್ಸರದ ಕ್ರುತ್ತಿಕೆ ಸಂಕೃತಿ ಮೊದಲಾಗಿ ಶ್ರೀಮತು
ಹಟ್ಟಿಯಂಗಡಿಯ ಲೋಕನಾಥದೇವರ ಭ[೦]- |
2 ಡಾರಕೆ ಬಾಉರಾಉತ್ತರ ಮಗಳು ಸ[೦*]ಕಮಿ ಕೊಟ್ಟ ಧರ್ಮಸಾದನದ ಪತ್ರದ
ವೊಖಣೆಕ್ರ[ಮ*] ವೆಂತೆಂದರೆ ಸಾಬಲದಿ |
3 ಯ ವೊಳಗೆ ಬಾಉರಾಉತ್ತರು ಬೋಳಿಕೇರಿಯ ಅಯಿವರು ಹಲರುವರು ದಕ್ಷೆನಡುವ
ಭತ್ತ[ಳಿ]ಅವರಕಯಲಿ |
4 ಬಾಉರಾಉತ್ತರು ಮಲವಕೊಂಡು ತಾಉ ಬಾದು ನನಗೆ ಕೊಟು ನಾನು ಬಾದು
ಬಂದ ಕುದುರೆಗಡೆಯ ಗಡಿಯ ವಿವರ |
5 ಮೂಡಲು ತಿರುಮೆಟ್ಟಿಜಡಿನ ಗಡಿಯಿಂದಂ ಪಡುವಲು ತೆಂಕಲು ಹೊಳೆಯ
ಗಡಿಯಿದಂ ಬಡಗಲು ಪಡು- |
6 ವಲು ಹೊಳೆ ಸಲಮ[ಡಿ]ದ ವೊನಕೆಯ ಗಡಿಯಿಂದಂ ಮುಡಲು ಬಡಗಲು
ಸಾಲಗಡಿಯಿಂದಂ ತೆಂಕಲು |
7 ಯಿಂತ್ತೀ ನಾಕು ಚತಿಸೀಮೆಯ ವಳಗಣ ಸದ್ರಶ ಬಿತ್ತಣಕ್ಕೆಮುಡಿ 16 ಗದೆ
ಯಿಗಡಿ[ಯ] ವೊಳಗಣ ಬಿಟ್ಟು ತೆಟ್ಟು ಅ- |
8 ಸಭಸ ಸಭ[ಮ]೦ದು ಮರಪಲ ಹೊಳೆಕಳು ಸಹ ಸಾಬಾದು ಬಿದಸ್ತಳದ ಮೆಳ ಹಟ್ಟಿ
ಅಂಗಡಿಯ ಲೋಕನಾಥದೇ- |
9 ವರ ಅಯನ ಮೂರುದಿನದ ರಂಗಪೂಜೆಗೆ ನಾಗ[೦]ಡುಗದಲು ಮುಡಿ4 ||
ಅಕ್ಕಿಯನು ಕಾಲಕಾಲಂ ಪ್ರತಿಯ ಪ್ರತಿಯಲೂ ನ- |
10 ಡಸಿ ಬಹ ನೆಂದು ಕೊಟ್ಟ ಧರ್ಮ ಸಧನದ ಪತ್ರಯಸ್ತಳದ ಆಗುಹೋಗು ದೇವರ
ದೇಯಸ್ತಳಕೆ ತೆರುಬೇಡಿಗೆ ಯಿಲ |
11 ಯಿ ಪತ್ರಕೆ ಆಗ ಅರಿಕೆ ಹೊಣಗಣಪ್ಪ ಸೆಟ್ಟಿಮಗ ಬಯರಣ ಸೆಟಿ ಸಷಿ ದೊರೆಗಳು
ಯಿಸರಸೆಟಿ ಮಗತಿಂ- |
12 ಮಯ ಸೆಟಿ ಮುಗುವಿನ ನಾರಣಸೆಟ್ಟಿ ಮಗ ತಿರುಮಣ ಸೆಟ್ಟಿ ಕ. ತರವೊಪು
ಹೊಣಿಗರನ ವೋಪು ತಲಉರ ಬ್ರ – |
13 ಮರು ದೊಱಿಗಳ ವೊಪು ಯಿಂತಿಯವರ ಉಭಯ ವುತ್ತು [ದಿ]೦ದ ಹೊಡೆ ಮಧೆಸ್ತರ
ಬರಹಾ[||*] |
| |
|
\D7
|