| |
South
Indian Inscriptions |
| |
|
|
|
TEXT OF INSCRIPTIONS
5 ಬಿಲನೆಂಬ ಗದ್ದೆ ಮು 1| ಯೇಕಾಂತನಹಾಳಿ ಮು 1| ಒಳ್ಳಿನಹಾಳಿ ಮು ||
ಬಿಡ್ಡನೆಂಬಗದ್ದೆ ಮು || ನಗರಹಾಳಿ ಮು 1| ಹುಡುವಲು ಮು 1| ಅಂತುಬಯಲು
ಮು 11| ಮತ್ತಂ ಮಲ್ಲಗದ್ದೆ |
6 ಮು 1 ದೇಉಸೆಟ್ಟಿಮನೆ ಮಂದಣಮಲ್ಲಿಗದ್ದೆ ಮು 1 || ಬೊಂಮನಮಕ್ಕಿ ಮು 3
ಅಂತು ಮು [5] || ಉಭಯಂ ಬಯಲು ಮಕ್ಕಿಸಹ ಗದೆ ಮು 16 |||
ನೂಯಿಬಾಳಿಗೆಬಂದ ಮನೆಕಣಹಟ್ಟಿ ಕೊಟ್ಟಗೆ |
7 ಅಸಭಸಭ ಬಕಿ ಕೆಳಗಣ ತೆಂಗಿನ ತೋಟಮುಂತಾದ ಸರ್ವ್ವಸ್ವಕ್ಕೆ ಬಂಕಿಯರಸರು
ಹೊನ್ನಯ ಕಂಬಳಿ ವೊಡೆಯರು ಕೋಟೇಸರ ಅಡಹನ ಮಗ ಯಿಸರ ಅಡಹಗೆ
ಕೊಟ ವರಹ ಗ 300 ಅಕ್ಷರದಲ್ಲೂಯಿದ |
8 ಮುಂನೂರ್ರು ವರಹನನೂ ಕೊಟ್ಟು ವೊಳಗಣ ಮೂಲ ಹೊರ್ರಗಣ ಅರುವಾರ
ಸಹ ಬಿಡಾರುವಾರವಾಗಿ ಬಿಡಿಸಿಕೊಂಡು ನಂಮ ವೊಂಮಗಳು ಹೊಂನ್ನಮ್ಮ
ಸೆಟ್ಟತಿಗೆ ಕಂನ್ಯಾ ದಾನವಾಗಿ ಯಿ ಸರ್ವ್ವಸ್ವದ ಅ- |
9 ರ್ಥ ಬಂದರು ಉ್ರತ್ತಿಬಂದರು ಆಕೆಗೆಯೆಂದು ಕೊಟ್ಟ ಪತ್ರ ಯಿ ಪತ್ರಕ್ಕೆ ಆದ
ಆರ್ರಿಕೆಯ ಹೊಣೆ ಮುಕಲಾಟಿಯ ಯಿಸರಅಡಹರು ಸಕ್ಷಿಯ ದೊರೆಗಳು
ಹೊಂನ್ನಯ್ಯಮೆರಟ ಕೊಟಣ ಕಂಬ – |
10 ಳಿ ಮಣಿಹೆಗ್ಗಡೆಯರು ಯಿಂತಿವರು ಭಯಾಂನುಮತದಿಂದ ಕರ್ತ್ತನವೊಪ್ಪ
ಹೆಣೆಕಾರ್ರನ ವೊಪ್ಪ ಚಿಟ್ಟಿಮಕ್ಕಿಯ ಬ್ರಹ್ಮರು ಮೂಲಿಯ ವೊಪ್ಪ ಕೋಟದ
ಅಯಿರೋಡಿಯ ಬ್ರಂಹರು |
11 ಸಾಕ್ಷಿ ದೊರೆಗಳ ವೊಪ್ಪ | ಯೀ ಸರ್ವ್ವಸ್ವವನೂ ಹೊಂನಮ ಸೆಟ್ಟಿಯತಿಯು ಅವರ
ಸಂತಾನದವರು ಬದ್ದು ಬರಲಾಗಿ ಅ ಸೂರಂಮ ಸೆಟತಿಯ ಮೂಂಮಕಳು ದುಗಣ
ಕೊಂಗನು ತಿಂಮಪ್ಪ ಕೊಂಗನು ಯಿ ಕರ್ತರು ವೊ- |
12 ಪ್ಪಿ ಸೂರ್ಯಗ್ರಹಣದಲಿ ಹಟ್ಟಿ ಯಂಗಡಿ ಲೋಕನಾಥ ದೇವರಿಗೆ ಅಮೃತಪಡಿಗೆ
ಯಿ ಬಯಲು ಮಕ್ಕಿ ಸಹ ಮು 16 || ಹದಿನಾರ್ರುಮುಡಿಯು ಮೂವತ್ತು ಹಾನೆ
ಗದ್ದೆಯನೂ ಧಾರೆಯ ನೆರ್ರದು ಕೊ |
13 ಟ್ಟದು ನಾಉ ಯಿ ಸರ್ಸ್ವಸ್ವವನು ವೊಪ್ಪಿದೇವರಿಗೆ ಕೊಟ್ಟೆಉ ಯಿ ಸರ್ವದ ಅರ್ಥ
ಬಂದರು ಉ್ರತ್ತಿಬಂದರು ದೇವರಭಂಢಾರಕ್ಕೆ ಅಗುಮಾಡಿಕೊಂಡು ಬದ್ದು ಬಹದು
| ಮುಂದೆ ಯಿ ಸರ್ವಸ್ವವನೂ ಹಿರಿದು |
14 ಹೊಂನೆಯ ಕಂಬಳಿವೊಡೆಯರು ಸೂರಂಮ ಸೆಟ್ಟಿತಿಯ ತಾಯಿ ಹೊಂನಮಸೆಟಿತಿಗೆ
ಕೊಟ ಸರ್ವಸ್ವವೆಂದು ನಂಮ ಅರಮನೆಯವರು ಕೇಳುವುದಿಲ್ಲಾಯೆಂದು ಕೊಟ್ಟ
ಧರ್ಮಸಾಧನದ ಪಟ್ಟಿ ಯಿದಕ್ಕೆ ಸಾಕ್ಷಿಗ | |
15 ಳು ಆದಿತ್ಯ ಚಂದ್ರಮಸ್ಸುಗಳು || |
| |
|
\D7
|