| |
South
Indian Inscriptions |
| |
|
|
|
TEXT OF INSCRIPTIONS
certain conditions in respect of the rate of produce to be paid by the
tenant. A portion of the land was also given to the same person as
dasavanda
It is dated Śaka 1419, Naḷa, Vaiśākha ba. 10 corresponding to 1496 A.D., May 10, the Śaka year being current. But the details are
not verifiable.
TEXT
1 ಶುಭಮಸ್ತು[|*] ಕೆಱೆಯ ಕಟುಗೊಡಗೆಯ ಸಾಧನದ ಪ್ರತಿ [|*] ಸ್ವಸ್ತಿಶ್ರೀ
ವಿಜಯಾದ್ಭುದಯ ಶಾಲಿವಾಹನ ಶಕವರುಷ 1419 ನೆಯ ನಳ ಸಂವತ್ಸರದ- |
2 ದ ವಯಿಶಾಖ ಬ 10ಲೂ ಶ್ರೀಮತು ಅಲಪಗಳಮಕಳು ನಾರಸಿಹದೇವಗಳಿಗೆ
ನಾರಸಿಹ ದೇವರ ಸ್ತಾನಿಕರು ಕೊಂಡಪ ತಿಂಮಣಗಳ ಮಕಳು ದೇವಪಗಳೂ |
3 ಕೊಟಕಟ್ಟುಗೊಡಗೆಯ ಸಾಧನದ ಕ್ರಮವೆಂತೆಂದರೆ ನಂಮ ಕದಿರಿ ಲಕ್ಷ್ಮೀನಾರಸಿಹ
ದೇವರ ಅಮುರುತಪಡಿ ನಯಿವೇದ್ಯಕೆ ಸಲುವ [ಹೊ]ದೆನಾಡೊಳಗಣ |
4 ನರಸಿಹಪುರವಾದ ಗುಂಡಲಹಳಿಯ ಗ್ರಾಮವನೂ ನಾನು ನಾರಸಿಹದೇವರ
ನಿರೂಪದಿಂದ ನಂಬಿಗಳು ಅಪಚಿ ಅನತಪಗಳಿಗೆ ಕಾಣಿಯಾಚಿಯಾಗಿ ಕೊಟದು |
5 ದೇವರ ಅಮುರುತಪಡಿ ನಯಿವೇದ್ಯ ಕಟಳಗೆಉ ಪರುವ ತಿಥಿಗಳ ಕಟಳೆಗೂ ದೇವರ
ವಿಶೇಷ ನಯಿವೇದ್ಯಕೆಉ ಗಂಧದ ಕ್ರಯಕೆಉ ಪಂಚ- |
6 ಪಱುವದಲೂ ಮಾಡುವ ಸೇವೆ ಯಿಉ ಮುಂತಾದ ಪರಿಚಾರಕರ ಜೀತಯಿಉ
ಮುಂತಾದ ಸೇವೆಗಳಿಗೆ ಮಾಡೊದಕೆ ನಂಬಿಗಳು ಯಿ ತಂಡದವರಿಗೂ ನೆಲದರ
ಕಾಣಿಕೆಯಾಚಿಯಾಗಿ ಕೊಟ |
7 ಗುಂಡಲನ ಹಳಿಯ ಗ್ರಾಮದಲೂ ಹಿರಿಯ ಕೆಱೆಗೆಪಡುವಲಾದ ಮಾವಿನಹಳವನೂ
ನಿಂಮಕಯ್ಯಲೂ ಧನವನೂ ಯಿಕ್ಕಿ ಕರುಕೂಲಿ ಕಂನೆಕೆಱೆಯನೂ ಕಟಿಸುವ
ಸಂಮಂಧ ನಿಉ ಆ ಹಳದಲೂ ಕೆಱಿಯನು ಕಟಿಸಿ ಕಱೆ- |
8 ಗೆ ಮಂಣನೂ ಬಹಳವಾಗಿ ಹಾಕಿ ಕಲುಕಟೆಯನೂ ಕಟಿ ಕಲ್ಲತೂಂಬನೂ ಯಿಕಿ
ಆ ತೊಬಿಗೆ ಯಿಟಗೆ ರಸವರ್ಗ ಸುಂಣಸಹಯಿಕಿ ತುಂಬನೂ ಜತನವಾಗಿ ಮಾಡಿ
ಆ ಕಱೆಯನೂ ಪೂರಯಿಸಿ ಆ ಕೆಱೆಯಕೆಳಗೆ ಅಚುಕಟಿನ ಗದೆಯನೂ ತಿದಿ ಆ
ಕೆಱೆಯ |
9 ಕೆಳಗೆ ಹುಟಿದಂಥಾ ಅಚಕಟನ ಗದೆಯನೂ ಬೆಳದ ಬೋಗ ನಾಲ್ಕು ಭೋಗ
ಮಾಂನ್ಯವಾಗಿ ಅನುಭವಿಸಿಕೊಂಬಿರಿ ಆ ನಾಲ್ಕು ಭೋಗಉ ತುಂಬಿದಬಳಿಕ
ನಾಉನಿಮಗೆ ಕೊಡುವದ ಸವಂದ ಆ ಕೆಱೆಯ ಕೆಳಗೆ ಹುಟಿದಂಥಾ ಗದೆಗೆ ವೊಳ
ದಸವಂದವಾಗಿ |
10 ಹತಕೆ ಮೂಱಱವೊಳ ದಸವಂದದ ಮರಿಯಾದೆಯಲೂ ಕಟುಗೊಡಗೆಯನೂ
ಪಿಱೆಚಿ ಆ ಕಟುಗೊಡಗೆಯ ಗದೆಗೆ ಉತಮ ಮಧ್ಯಮ ಕನಿಸವಾಗಿ ತ್ರಿಸ್ತಾನದಲೂ
ಶಿಲಾಸ್ತಾಪನವನೂ ಮಾಡಿಸಿಕೊಡು- |
11 ವೆಉ ಯೀ ಕೆಱೆಯ ಕಟುಗೊಡಗೆ ಮಾಂನ್ಯವಾಗಿ ಕೊಟಹೊಲನು ಯಾಗ
ವ್ಯವಸಾಯವಮಾಡಿ ರಾಘಿಯಬಿತುವ ಹೊಲದೊಳಗೆ ನಮಗೆ ಕಬುಗೊಡಗೆ
ಕೊಟ್ಟಹೊಲನು ಖಂ||೦ ತರಿಸು |
| |
|
\D7
|