1 ಶ್ರೀ ಗಣಾಧಿಪತಯೇ ನಮಃ ನಮಸ್ತುಂಗ ಶಿರಶ್ಚುಂಬಿ ಚ- |
2 ೦ದ್ರ ಚಾಮರ ಚಾರವೇ [|*] ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾ- |
3 ಯ ಶಂಭವೇ [||*] ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರು- |
4 ಷ 1477 ಸಂದು ಯೆಂಟನೆಯ ವರ್ತಮಾನ ಮನ್ಮಥ ಸಂವ- |
5 ತ್ಸರದ ಫಾಲ್ಗುಣ ಶುಧ 5 ಲು ಶ್ರೀಮನ್ಮಹಾ ರಾಜಾಧಿರಾಜ ರಾಜ- |
6 ಪರಮೇಶ್ವರ ಶ್ರೀ ವೀರಪ್ರತಾಪ ಶ್ರೀವೀರ ಅಚ್ಚುತರಾಯ ಮಹಾ- |
7 ರಾಯರು ವಿಜಯನಗರಿಯ ಸಿಂಹಾಸನದಲ್ಲಿ ಚಿತ್ತಯಿಸಿ ಸಕ- |
8 ಲ ವಂರ್ನಧಂರ್ಮಾಶ್ರಮಂಗಳನೂ ವಿಚಾರಿಸುವ ಕಾಲದ- |
9 ಲು ಆರಾಯರ ನಿರೂಪದಿಂದ ಬಾರಕೂರು ಮಂಗಲೂರ |
10 ರಾಜ್ಯವನು ಸುಂಕಣನಾಯಕರಿಗೆ ಪಾಲಿಸಿ ಆ ನಾಯಕರ ನಿ- |
11 ರೂಪದಿಂದ ಕೊಡಪ್ಪೊಡೆಯರು ಬಾರಕೂರ ರಾಜ್ಯವನು |
12 ಪ್ರತಿಪಾಲಿಸುವ ಕಾಲದಲ್ಲಿ ಉಪ್ಪೂರಗ್ರಾಮದಮೇಲೆ ಕೊಂ- |
13 ಡಪ್ಪೊಡೆಯರು ರಾಜಕಾರ್ಯ್ಯವಮಾಡುವಾಗ ಹಂಣಿನ ನಿರಿಗೆ |
14 ಗಂಡಿನ ತಲೆಗೆ ತಪ್ಪಿದಕ್ಕೆ ಅರಸಿಗೆ ಅರ್ಧರಾಜ್ಯಕ್ಕೆ ಪಂಥಯೆ |
15 ೦ಬ ವಿವರಕ್ಕೆ ಅರಮನೆಯ ಭಂಡಾರಸ್ತಳ ಉಪ್ಪೂರಗ್ರಾಮ- |
16 ಉ ತೆರುವ ಕುಳಾಗ್ರದ ಹೊಂನಿನೊಳಗೆ ನಿಂಮ ಪದಾಂತಿ- |
17 ಕಕ್ಕೆ ನಿಂಮ ಗ್ರಾಮದ ಒಳಗೆ ಯೆಂಭತ್ತುಮುಡಿ ಕುಳಾಗ್ರ ಆದ | - |
18 ರೊಳಗೆ ನಾಲ್ಕುಮುಡಿ ಕುಳಾಗ್ರವನು ಆಂಣಕೆಕುಡೆಯರ ಮ- |
19 ಗ ಶಿವಕೆಕುಡೆಯರಿಗೆ ಕೊಟ್ಟೆಉ ಮಿಕ್ಕ ಯೆಪ್ಪತ್ತಾಱ ಮುಡಿ ಕು- |
20 ಳಾಗ್ರವನು ಉತ್ತಾರವಮಾಡಿಕೊಂಡು ಮೇಲಾದ ಕುಳಾಗ್ರದ |
21 (ಕುಳಾಗ್ರದ) ಮುಡಿ ಉಪ್ಪೂರ ನಾಲ್ಕು ಚತುಸೀಮೆಯೊಳಗೆ ಮು- |
22 ಡಿನಾಂನೂರು ನಾಂನೂರು ಮುಡಿಯೊಳಗೆ [ಚ]೦ನಿ ಗ- |
23 ಳಿಗೆ ಉಂಟಾದ ಉತ್ತಾರವನು ತೆಗೆದುಕೊಂಡು . . ದ ಹೊ |
24 ೦ನನು ಅರಮನೆಗೆತೆತ್ತು ಬಾಳುವಿರಿಯೆಂದು ಬರಸಿಕೊ- |
25 ಟ ಪಟ್ಟೆಯ ಪಟ್ಟಿಯಲ್ಲಿ ಬರದ ಯೆಂಭತ್ತು ಮುಡಿ ಕುಳಾಗ್ರವ- |
26 ನು ಆ ಚಂದ್ರಾರ್ಕವಾಗಿ ನಿಂಮ ಗ್ರಾಮಉ ಬಾಳುವಿರಿಯೆಂದು |
27 ಕೊಂಡಪ್ಪೊಡೆಯರು ಬರಸಿಕೊಟ ಪಟ್ಟೆ ಕರಣಿಕ ತಿಂಮರಸರ |
28 ಬರಹ [||*] ದಾನಪಾಲನಯೋರ್ಮಧ್ಯೇ ದಾನಾತ್ ಶ್ರೇಯೋನುಪಾಲನಂ [|*] |
29 ದಾನಾತ್ ಸ್ವರ್ಗ್ಗಮವಾಪ್ನೋತಿ ಪಾಲನಾದಚ್ಯುತಂ ಪದಂ [||*] ಶ್ರೀ |
|
|